ಫ್ಯಾಮಿಲಿ ಹಾರರ್ ಥ್ರಿಲ್ಲರ್ – Part 1

ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿರುವ ಈ ಕಥೆಯು ಹಳ್ಳಿಯೊಂದರಲ್ಲಿ ನಡೆದ ನೈಜ ಆಧಾರಿತ ಘಟನೆಯಾಗಿದೆ.

ಇನ್ನು ಕಥೆಗೆ ಬರುವುದಾದರೆ;

ಸೋಮಣ್ಣ ತನ್ನ ಹೆಂಡತಿ ಸುಭದ್ರ ಹಾಗೂ ಮಗ ರೂಪೇಶ್ ನೊಂದಿಗೆ ತೋಟದ ಬಳಿ ಮನೆ ಮಾಡಿಕೊಂಡು ಊರಿಂದ ತುಸು ದೂರದಲ್ಲಿ ವಾಸ ಮಾಡುತ್ತಿರುತ್ತಾನೆ.ಸೋಮಣ್ಣ ತೋಟದ ಕೆಲಸ ನೋಡಿಕೊಂಡರೆ, ಇತ್ತ ಸುಭದ್ರ ಮನೆ ಸಂಸಾರದ ಜೊತೆಗೆ, ಎಲ್ಲ ಕೆಲಸದಲ್ಲೂ ತನ್ನ ಗಂಡನಿಗೆ ಸಹಾಯ ಮಾಡುತ್ತಿದ್ದಳು. ಮಗ ರೂಪೇಶ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದ, ಕಾಲೇಜ್ ಮುಗಿದ ಬಳಿಕ ಅವನು ಸಹ ತನ್ನ ತಂದೆ ತಾಯಿಗೆ ನೆರವಾಗುತ್ತಿದ್ದ. ಹೀಗೆ ತನ್ನ ಮನೆ ಆಯ್ತು ತನ್ನ ಸಂಸಾರ ಆಯ್ತು ಅಂತ ಸೋಮಣ್ಣ ತನ್ನ ಪಾಡಿಗೆ ತಾನು ಜೀವನ ನಡೆಸುತ್ತಿದ್ದ.

ಸೋಮಣ್ಣ ತುಂಬ ಶ್ರಮ ಜೀವಿ ಬೆಳಿಗ್ಗೆ ಬೇಗನೆ ಏಳುತ್ತಿದ್ದ ಮುಂಜಾನೆ ಅಷ್ಟೊತ್ತಿಗೆ ದನ ಕರುಗಳನ್ನು ಹೊಲದ ಹತ್ತಿರ ಸಾಗಿಸಿ, ದನ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದ. ನಂತರ ದನಗಳಿಗೆ ಮೇವು ಏರ್ಪಡಿಸಿ, ತೋಟಕ್ಕೆ ಹೋಗುತ್ತಿದ್ದ. ಇತ್ತ ಸುಭದ್ರ ಬೆಳಗ್ಗೆ ಸ್ನಾನ ಮುಗಿಸಿ ದೇವರಿಗೆ ಪೂಜೆ ಮಾಡಿ ನಂತರ ಅಡುಗೆ ಕಾರ್ಯ ನೋಡುತ್ತಿದ್ದಳು.ರೂಪೇಶ ಅಮ್ಮ ಮಾಡಿದ ಊಟ ತಿಂದು ಕಾಲೇಜ್ ಗೆ ಹೋಗುತ್ತಿದ್ದ, ಇತ್ತ ಸುಭದ್ರ ಅಡುಗೆ ಬುತ್ತಿ ತಗೊಂಡು ತೋಟದ ಬಳಿ ಗಂಡನ ಜೊತೆ ಊಟ ಮಾಡಿ, ಮಧ್ಯಾಹ್ನ ತನಕ ಅಲ್ಲೇ ಇದ್ದು ಮನೆಗೆ ಬರುತ್ತಿದ್ದಳು.ಸೋಮಣ್ಣ ಕೂಡ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಮನೆಯಲ್ಲಿ ವಿಶ್ರಾಂತಿ ಪಡೆದು ಪುನಃ ಸಂಜೆ ಹೊತ್ತಿಗೆ ಹೊಲದ ಕಡೆ ಹೋಗುತ್ತಿದ್ದ. ಹೀಗೆ ಇವರ ದಿನಚರಿ ನಡೆಯುತ್ತಿತ್ತು.ಸೋಮಣ್ಣ ಕುಟುಂಬದ ಎಲ್ಲ ಹಾಗೂ ಹೋಗುಗಳನ್ನು ನೋಡಿಕೊಂಡು ಸಂಸಾರ ಸಾಗಿಸುತ್ತಿದ್ದ.ಈ ಮಧ್ಯೆ ಸೋಮಣ್ಣನಿಗೆ ದಿಢೀರನೆ ಕಾಯಿಲೆ ಬಂದು ಮಂಚ ಹತ್ತಿದ್ದ,ನಂತರ ಕೆಲವು ದಿನಗಳಿಗೆ ಸಾವು ಕೂಡ ಸಂಭವಿಸಿತು. ಗಂಡನ ಸಾವಿನಿಂದ ಸುಭದ್ರಾಳಿಗೆ ದಿಕ್ಕು ತೋಚದಂತಾಯಿತು. ಹಿರಿಯರ ನೆರವಿನಿಂದ ಗಂಡನ ಕಾರ್ಯಕ್ರಮ ನೆರವೇರಿಸಿದ್ದಳಾದರೂ ಮನಸ್ಸಿನಲ್ಲಿ ಆತಂಕ ಮೂಡಿತ್ತು. ಗಂಡನ ಸಾವಿನಿಂದ ಹೊರಬರಲು ಸುಮಾರು ದಿನಗಳೇ ಬೇಕಾಯಿತು, ಅದ್ಯಾಗು ತನ್ನ ಮಗನ ಭವಿಷ್ಯಕ್ಕಾಗಿ ಆದರೂ ಜೀವನ ಸಾಗಿಸಬೇಕೆಂದು ಸಾವಿನ ಕೊರಗಿನಿಂದ ಹೊರಬಂದು ಮನೆಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಳು.ತೋಟದ ಕೆಲಸದಲ್ಲಿ, ಬೆಳೆ ಬೆಳೆಯುವ ವಿಚಾರದಲ್ಲಿ, ಹಾಗೆ ದನ ಕರುಗಳ ಮಾರಾಟದ ಸಂಧರ್ಭದಲ್ಲಿ ಹಿರಿಯರ ನೆರವು ಸಿಗುತ್ತಿತ್ತು. ಹೆಂಗೋ ತಕ್ಕ ಮಟ್ಟಿಗೆ ಸಂಸಾರ ನಡೆಸಿಕೊಂಡು ಬರುತ್ತಿದ್ದಳು.ಹೀಗೆ ಕಾಲ ಕಳೆಯುತ್ತಿದ್ದಂತೆ ಸುಭದ್ರಳನ್ನು ಊರಿನ ಗಂಡಸರು ನೋಡುವ ಬಗೆ ಬದಲಾಯಿತು.ಸುಭಧ್ರಾಳು ಹಳ್ಳಿ ಹೆಂಗಸು ಆದ್ದರಿಂದ ಮನೆ ಕೆಲಸ ತೋಟದ ಕೆಲಸ ಮಾಡಿ ದಷ್ಟ ಪುಷ್ಟವಾದ ಮೈಕಟ್ಟು ಹೊಂದಿದ್ದಳು. ನೋಡಲು ಪೊಗಡ್ ದಸ್ತಾಗಿ ಇದ್ದಿದ್ದರಿಂದ ಹಿರಿಯರ ಕಣ್ಣು ಗಂಡ ಸತ್ತ ಸುಭಧ್ರಾಳ ಮೇಲೆ ಬಿತ್ತು.

Leave a Comment