ಆರ್ ಸಿ ಬಿ Back 2 Back Ipl ಟ್ರೋಫಿ ಗೆದ್ದಿದ್ದಾದ್ರು ಹೇಗೆ?

ಆರ್ ಸಿ ಬಿ Back 2 Back Ipl ಟ್ರೋಫಿ ಸರಿಸುಮಾರು ಐಪಿಎಲ್ ಶುರುವಾಗಿ 18 ವರ್ಷಗಳು ಕಳೆದಿದ್ದವು. ಆದರೆ ವಿಜಯ್ ಮಲ್ಯ ಮಾಲೀಕತ್ವದ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿ ಬಿ ತಂಡ ಕಪ್ ಗೆಲ್ಲಲು ಸೆಣಸಾಡುತ್ತಿತ್ತು. ಅದೆಷ್ಟೋ ಪ್ರತಿಭಾವಂತ ಆಟಗಾರರ ಶ್ರಮ, ಕೋಟ್ಯಂತರ ಅಭಿಮಾನಿಗಳ ಆಶಯ, ಅದೊಂದು ಗೆಲುವಿಗಾಗಿ ಪರಿತಪಿಸುತಿತ್ತು. ಕ್ರಿಕೆಟ್ ಲೋಕದಲ್ಲಿ ಬೇರೆ ಯಾವುದೇ ತಂಡಕ್ಕೂ ಇಲ್ಲದ ಹೆಗ್ಗಳಿಕೆ ನಮ್ಮ ಆರ್ ಸಿ ಬಿ ತಂಡಕ್ಕಿತ್ತು. ಇಡೀ ಜಗತ್ತೇ ಆರ್ ಸಿ ಬಿ ಯ ಒಂದು ಗೆಲುವಿಗಾಗಿ ಕಾದಿತ್ತು.ಪ್ರಪಂಚದಲ್ಲೇ ಅತ್ಯಂತ ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದರು ಸಹ ಅ ಒಂದು ಕ್ಷಣ ಬರಲೇ ಇಲ್ಲ. ಎಷ್ಟೋ ಅವಮಾನಗಳು, ಇನ್ನೆಷ್ಟೋ ಅಭಿಮಾನಿಗಳ ಕಣ್ಣೀರು, ಹೀಗೆ ಕ್ರಿಕೆಟ್ ಲೋಕವೇ ಅ ಒಂದು ಕ್ಷಣಕ್ಕಾಗಿ ಕಾದಿತ್ತು.

ಆರ್ ಸಿ ಬಿ Back 2 Back Ipl ಟ್ರೋಫಿ

ಸರಿ ಸುಮಾರು 18 ವರ್ಷಗಳ ನಿರಂತರ ನಿರೀಕ್ಷೆಯಲ್ಲಿ ಕಂಡಿದ್ದೆಲ್ಲ ಬರಿ ಹಗಲು ಗನಸು. ವಿರಾಟ್ ಕೊಹ್ಲಿ ಆರ್ ಸಿ ಬಿ ಗಾಗಿ ರನ್ ಹೊಳೆನೆ ಹರಿಸಿದ್ರು, ಎಬಿಡಿ ಅಂತು ಪ್ರಾಣ ಕೊಟ್ಟು ಮ್ಯಾಚ್ ಗೆಲ್ಲುಸ್ತಾ ಇದ್ರು, ಇನ್ನು ಗೇಲ್ ನ ಆಟ ಅಂತು ಮರಿಯೋಕೆ ಆಗೋಲ್ಲ ಇಂತ ದಿಗ್ಗಜರಿಂದ ಕೂಡಿದ್ದ ಟೀಮ್ ಅದು, ಇನ್ನೂ ಅವ್ರ ಫ್ಯಾನ್ಸ್ ಅಂತು ಆರ್ ಸಿ ಬಿ ಮ್ಯಾಚ್ ಅಂದ್ರೆ ಹುಚ್ಚೆದ್ದು ಕುಣಿತಿದ್ದ ದಿನಗಳವು. ಕ್ರಿಕೆಟ್ ಬಗ್ಗೆ ಗೊತ್ತಿದ್ದವರು,ಗೊತ್ತಿಲ್ಲದವರು,ಅಭಿಮಾನಿಗಳು, ಸಾಮಾನ್ಯ ಪ್ರಜೆಗಳು ಹೀಗೆ ಭಾರತದಾದ್ಯಂತ ಆರ್ ಸಿ ಬಿ ತಂಡವನ್ನು ತಮ್ಮ ಜೀವನದ ಒಂದು ಭಾಗವಾಗಿ ಕರಗತ ಮಾಡ್ಕೋಬಿಟ್ರು, ಈಗ ಆರ್ ಸಿ ಬಿ ಕೇವಲ ಒಂದು ತಂಡ ಅಲ್ಲ ಅದು ಪ್ರತಿಯೊಬ್ಬ ಅಭಿಮಾನಿಯ ನಾಡಿಮಿಡಿತ, ಇಂತಹ ಕ್ರೇಜ್ ಇರುವಂತಹ ತಂಡಕ್ಕೆ ಅದೊಂದು ಗೆಲುವಿನ ಕೊರತೆ ಇತ್ತು. ಅ ಒಂದು ಗೆಲುವಿನ ನಾಗಾಲೋಟ ನೋಡಲು ಜೀವ ಮಿಡಿಯುತ್ತಿತ್ತು.

ಐಪಿಎಲ್ ಶುರುವಾಗುತ್ತಿದ್ದಂತೆಯೇ ” ಈ ಸಲ ಕಪ್ ನಮ್ದು” ಅನ್ನೋ ಸ್ಲೋಗನ್ ಆರ್ ಸಿ ಬಿ ಅಭಿಮಾನಿಗಳ ಹಾರ್ಟ್ favorite ಆಗಿತ್ತು.

ಇದೆಲ್ಲದಕ್ಕೂ ಕೊನೆ ಎಂಬಂತೆ 2022 ರಲ್ಲಿ ಒಬ್ಬ ಗೆಲ್ಲುವ ಕಿಚ್ಚು ಹೊತ್ತಿಸಲು ಆರ್ ಸಿ ಬಿ ಗೆ ಎಂಟ್ರಿ ಕೊಟ್ಟಿದ್ದ. ಟ್ರೋಫಿಯ ಆಸೆಯನ್ನೇ ಕಳೆದುಕೊಂಡಿದ್ದ ಜೀವಗಳಿಗೆ ಹೊಸ ಹುರುಪನ್ನು ತಂದಿದ್ದ. ಇಷ್ಟು ವರ್ಷ ಎದೆಯಲ್ಲಿ ಹತ್ತಿದ್ದ ಕಿಚ್ಚಿಗೆ ಬೆಂಕಿಯ ಕಿಡಿಯಾಗಿ ಬಂದಿದ್ದ. ಅವನ ಆಗಮನವು ಇಡೀ ತಂಡಕ್ಕೆ ಆನೆ ಬಲ ತಂದಿತ್ತು.18 ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದ ನಮ್ಮ king Kohli ಗೆ ಹೆಗಲು ಕೊಟ್ಟು ನಿಲ್ಲಲು ಆತನ ಆಗಮನವಾಗಿತ್ತು. ಇದೆಲ್ಲ ಅ ದೇವರ ಕೃಪೆ ಎಂದರು ಸುಳ್ಳಾಗಲಾರದು. ನಂತರ ಅ ಭರವಸೆಯನ್ನು ಆರ್ ಸಿ ಬಿ ನಾಯಕನನ್ನಾಗಿ ನೇಮಕ ಮಾಡಿತು. ಆಮೇಲೆ ನಡೆದಿದ್ದೆಲ್ಲ ಚರಿತ್ರೆ. ನಾಯಕ ರಜತ್ ಯುವರಾಜನ ಆಗಮನ ನಮ್ಮ ಕಿಂಗ್ ನ ಸುದೀರ್ಘ ಕಾಲದ ವನವಾಸಕ್ಕೆ ಉಪಶಮನ ನೀಡಿತು.

2025 ರಲ್ಲಿ ಆರ್ ಸಿ ಬಿ ತಂಡವು 18 ವರ್ಷಗಳ ಬಳಿಕ ತನ್ನ ಮೊಟ್ಟ ಮೊದಲ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಆ ಗೆಲುವಿಗೆ ಕಿಂಗ್ ಕಣ್ಣಲ್ಲಿ ಕೂಡ ಹರ್ಷೋದ್ಗಾರದ ಕಣ್ಣೀರು ಸುರಿಯಲಾರಂಭಿಸಿದವು. ಇಡೀ ಸ್ಟೇಡಿಯಂ ಅಲ್ಲಿ ಆರ್ ಸಿ ಬಿ ಆರ್ ಸಿ ಬಿ ಆರ್ ಸಿ ಬಿ ಎಂಬ ನಿನಾದಗಳು ಕೇಳಲಾರಂಭಿಸಿದವು. ಆ ಒಂದು ಗೆಲುವಿಗಾಗಿ ಕಾಯುತ್ತಿದ್ದ ಆರ್ ಸಿ ಬಿ ಯ ದಿಗ್ಗಜ ಆಟಗಾರರು ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಆ ಒಂದು ಗೆಲುವಿಗೆ ದೇಶ ವಿದೇಶಗಳಿಂದ ಹೊಗಳಿಕೆಯ ಪ್ರತಿಕ್ರಿಯೆಗಳು ಬರಲಾರಂಭಿಸಿದವು, ಈ ಒಂದು ಸುಂದರ ಸಡಗರವನ್ನು ವರ್ಣಿಸಲು ನನಗೆ ಪದಗಳೇ ಸಾಲುತ್ತಿಲ್ಲ.ಆ ರಾತ್ರಿ ಇಡೀ ದೇಶ ಸಂಭ್ರಮದಲ್ಲಿ ಮುಳುಗಿತ್ತು. ಫ್ಯಾನ್ಸ್ ಹುಚ್ಚೆದ್ದು ಕುಣಿಯಲಾರಬಿಸಿದರು, ಇಡೀ ಭಾರತ ಮತ್ತೊಮ್ಮೆ ದೀಪಾವಳಿ ಆಚರಿಸಿತ್ತು. ಸಿಕ್ಕ ಸಿಕ್ಕಲ್ಲಿ ಅನ್ನದಾನ ಕಾರ್ಯಕ್ರಮಗಳು, ಪಟಾಕಿ ಸಂಭ್ರಮಗಳು, ಇನ್ನೂ ಆರ್ ಸಿ ಬಿ ಯ ವಿಜಯ ಪತಾಕೆ ಸಂಭ್ರಮದಲ್ಲಿ ನೆತ್ತರು ಹರಿಸಿದ್ದಂತು ಕಟು ಸತ್ಯ. ಅಂದು ರಕ್ತ ಚರಿತ್ರೆ ಸೃಷ್ಟಿಯಾಯಿತು.

ಆರ್ ಸಿ ಬಿ ತಂಡದ ಆ ಗೆಲುವು ಕೇವಲ ಗೆಲುವು ಮಾತ್ರ ಅಲ್ಲ, ಅದು ಚರಿತ್ರೆಗೆ ಬುನಾದಿ ಹಾಕಿದಂತಹ ಕ್ಷಣ, ಎಷ್ಟೋ ನಾಯಿ ನರಿಗಳ ಬಾಯಿ ಮುಚ್ಚಿಸಿದ ಗೆಲುವದು, ಕೋಟ್ಯಂತರ ಅಭಿಮಾನಿಗಳ ಕನಸು ನನಸಾದಂತಹ ಗೆಲುವದು. ಗೆಲುವಿನ ರುಚಿ ಕಂಡಂತಹ ಆರ್ ಸಿ ಬಿ ತಂಡ ಈಗ ಕುದುರೆ ಸವಾರಿ ಮುಂದುವರಿಸುತ್ತಿದೆ.

ಈಗ 2026 ರಲ್ಲಿ ಕೂಡ ಐಪಿಎಲ್ ಟೂರ್ನಿ ಗೆಲ್ಲುವ ಮೂಲಕ ಟ್ರೋಫಿ ಯನ್ನು ತನ್ನಲ್ಲಿಯೇ ಇರಿಸಿಕೊಂಡಿದೆ.ಈಗ ಆರ್ ಸಿ ಬಿ ಕೇವಲ ಒಂದು ತಂಡವಾಗಿ ಉಳಿದಿಲ್ಲ, ಯಾರು ಕೂಡ ಊಹಿಸದ ಮಟ್ಟಕ್ಕೆ ಹೆಮ್ಮರವಾಗಿ ಬೆಳೆದು ನಿಂತಿದೆ. ಅಂದು ಶತ್ರು ತಂಡಗಳ ವಿರುದ್ಧ ಗೆಲ್ಲಲು ಹೈರಾಣಾಗುತ್ತಿದ್ದ ತಂಡ ಇಂದು ಅಟ್ಟಾಡಿಸಿ ಹೊಡೆಯೋ ಮಟ್ಟಕ್ಕೆ ಬಲಿಷ್ಟ ತಂಡ ಎಂದು ಗುರುತಿಸಿಕೊಂಡಿದೆ.

ಆರ್ ಸಿ ಬಿ ಬಲಿಷ್ಠ ತಂಡವಾಗಿ ಬದಲಾಗಿದ್ದು ಹೇಗೆ:-

ಆದರೆ 2025 ರಿಂದ ಈಚೆಗೆ ಎಲ್ಲವೂ ಬದಲಾಗಿದೆ ನಮ್ಮ ಹೆಮ್ಮೆಯ ಕ್ಯಾಪ್ಟನ್ ರಜತ್ ಪಟ್ಟಿದಾರ್ ಅವರ ಅತ್ಯುತ್ತಮ ನಾಯಕತ್ವ ಹಾಗೂ ನಮ್ಮ ದತ್ತು ಪುತ್ರ, ಆರ್ ಸಿ ಬಿ ಯ ಪ್ರತಿಷ್ಠೆ ವಿರಾಟ್ ಕೊಹ್ಲಿ ಅವರ ಆಕ್ರಮಣಕಾರಿ ಆಟ, ಕೃನಾಲ್ ಅವ್ರ Fast/Spin ಮ್ಯಾಜಿಕ್, ಭುವಿ ಹಾಗೂ ಹೆಜ್ಜೆಲ್ವುಡ್ ಅವರ Swing Seam Yorkes, ಸಾಲ್ಟ್ ಅವರ ಆಕ್ರಮಣಕಾರಿ Mindset,Paddikkal ಅವರ Upgrade Version,Tim ಹಾಗೂ Romario ಅವರ ಭಾರಿ ಹೊಡೆತಗಳು ಇನ್ನುಳಿದಂತೆ Jitesh ಅವರ ಕೀಪಿಂಗ್ ಹಾಗೂ Rasik ಅವರ ಸಹಕಾರ ಇಂದು ಆರ್ ಸಿ ಬಿ ಯನ್ನು ಗೆಲುವಿನ ದಡದಲ್ಲಿ ತಂದು ನಿಲ್ಲಿಸಿದೆ.ಇದೆಲ್ಲದರ ಜೊತೆಗೆ ನಮ್ಮ ಕೋಚ್ ಗಳ ಅತ್ಯುತ್ತಮ ಸಹಕಾರ ಆಟಗಾರರನ್ನು ಇನ್ನಷ್ಟು ಹುರಿದುಂಬಿಸಿದವು. ಅದರಲ್ಲೂ ಬಲಿಷ್ಟ ತಂಡ ಕಟ್ಟಲು Master Plan ರೂಪಿಸಿದ Dk Bhai , Bombat ಹಾಗೂ ಕೋಚ್ Andy Flower ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.ಇದೆಲ್ಲದರ ಪರಿಣಾಮ ಇಂದು ನಮ್ಮ RCB ತಂಡವು ಯಾರು ಕೂಡ ಸೋಲಿಸಿದ ತಂಡವಾಗಿ ಹೊರ ಹೊಮ್ಮಿದೆ, ಈಗಿನ ನಮ್ಮ ಆರ್ ಸಿ ಬಿ ತಂಡ ಯಾವ ಮಟ್ಟಿಗೆ ಬಲಿಷ್ಟವಾಗಿದೆ ಎಂದರೆ ಇದೇ ತಂಡ ಮುಂದುವರೆದಿದ್ದಲ್ಲಿ ಮುಂಬರುವ ಎಲ್ಲ ಐಪಿಎಲ್ ಟೂರ್ನಿಗಳನ್ನು ಗೆಲ್ಲುವ ಭರವಸೆ ಮೂಡಿಸಿದೆ. ಈಗಾಗಲೇ Back To Back 2 ಟ್ರೋಫಿ ಗೆದ್ದಿರುವ ಸಡಗರದಲ್ಲಿರುವ ನಮ್ಮ ಹೆಮ್ಮೆಯ ಆರ್ ಸಿ ಬಿ ತಂಡವು Hatrick Trophy ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ.

at Last ನಾನ್ ಹೇಳೋದು ಒಂದೆ ” ಗೆದ್ರು ಸೋತ್ರು ಆರ್ ಸಿ ಬಿ ಫಾರೆವರ್”

Leave a Comment