Davangere Tragedy: ವಿವಾಹಿತ ಮಹಿಳೆ ಮೇಲೆ 10 ಜನರಿಂದ ಸಾಮೂಹಿಕ ಅತ್ಯಾಚಾರ ಪ್ರಕರಣ.

ಸಾರಾಂಶ:-
Davangere Tragedy ದಾವಣಗೆರೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಜೂನ್ 3 ರಂದು ನಡೆದಿರುವ 41 ವರ್ಷದ ವಿವಾಹಿತ ಮಹಿಳೆ ಮೇಲೆ 10 ಜನ ಕಾಮುಕರಿಂದ ಸಾಮೂಹಿಕ ಅತ್ಯಾಚಾರ ಪ್ರಕರಣ ಈಗ (ಜೂನ್ 10 ರಂದು) ತಡವಾಗಿ ಬೆಳಕಿಗೆ ಬಂದಿದೆ.ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ವ್ಯಾಪ್ತಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಈಗ ಇಡೀ ರಾಜ್ಯದಲ್ಲಿ ಆತಂಕ ಮೂಡಿಸಿದೆ. ಪತಿಯೊಂದಿಗೆ ಜಗಳವಾಡಿ ತವರು ಮನೆಗೆ ತೆರಳುತ್ತಿದ್ದ ವೇಳೆ ನಡೆದಿರುವ ಘಟನೆ.

Davangere Tragedy

Davangere Tragedy

ದಾವಣಗೆರೆ (ಜೂನ್ 3):

ಆಗಿದ್ದೇನು?

ಪ್ರತಿನಿತ್ಯ ಕುಡಿದು ಬಂದು ಹಿಂಸಿಸುತ್ತಿದ್ದ ಮದ್ಯಕ್ಕೆ ವ್ಯಸನಿಯಾಗಿದ್ದ ಕುಡುಕ ಗಂಡನ ಹಿಂಸೆ ತಾಳಲಾರದೆ ಸಂತ್ರಸ್ತ ಮಹಿಳೆ ಬೇಸತ್ತಿದ್ದಳು. ಈ ಘಟನೆ ನಡೆದ ದಿನವೂ ಕೂಡ ಗಂಡ ಅತಿಯಾಗಿ ಕುಡಿದು ಮನೆಗೆ ಬಂದಿದ್ದ. ಪತಿ ವಿಪರೀತ ಮದ್ಯ ಕುಡಿದು ಮನೆಗೆ ಬಂದಿದ್ದರಿಂದ ಸಂತ್ರಸ್ಥ ಮಹಿಳೆ ಹಾಗೂ ಗಂಡನ ನಡುವೆ ಮಾತಿನ ಚಕಮಕಿ ಶುರುವಾಗಿ ಜಗಳ ಸಂಭವಿಸಿದೆ. ಇದರಿಂದ ಮನನೊಂದ ಮಹಿಳೆ ಅದೇ ರಾತ್ರಿ ತನ್ನ ಅಣ್ಣನ ಮನೆಗೆ ಹೋಗಲು ನಿರ್ಧರಿಸಿ ಸುಮಾರು 7:30 ಗಂಟೆ ಸಮಯದಲ್ಲಿ ಮನೆಯಿಂದ ಹೊರ ಬಂದು ತವರು ಮನೆಗೆ ನಡೆದುಕೊಂಡು ಹೋಗುತ್ತಿರುತ್ತಾಳೆ. ಈ ವೇಳೆ ಅಲ್ಲೇ ಪಕ್ಕದಲ್ಲಿ ಒಂದು ಅಂಗಡಿಯ ಬಳಿ ಅಳುತ್ತಾ ನಿಂತಿರ್ತಾಳೆ, ಅದೇ ಸಮಯದಲ್ಲಿ ಅಲ್ಲಿದ್ದ ಯುವಕರಲ್ಲಿ ಓರ್ವ ಸುಸ್ತಾಗಿ ಅಳುತ್ತಿದ್ದ ಮಹಿಳೆಯನ್ನು ಕಂಡು ಆಕೆಯನ್ನು ಸಮಾಧಾನ ಪಡಿಸುವ ನೆಪದಲ್ಲಿ ಅಕ್ಕ ಸುಸ್ತಾಗಿದ್ದೀರ ತಗೊಳಿ ಜ್ಯೂಸ್ ಕುಡೀರಿ ಎಂದು 7ಅಪ್ ಜ್ಯೂಸ್ ಕುಡಿಯಲು ಕೊಡುತ್ತಾನೆ. ಆಕೆಯು ಕೂಡ ಯಾವುದೇ ಅನುಮಾನವಿಲ್ಲದೇ ಜ್ಯೂಸ್ ಸೇವಿಸುತ್ತಾಳೆ. ಆದರೆ ಅದರಲ್ಲಿ ಮದ್ಯ ಬೆರೆಸಿರುವುದರಿಂದ ಮಹಿಳೆ ಪ್ರಜ್ಞೆ ಕಳೆದುಕೊಂಡು ಎಚ್ಚರ ತಪ್ಪಿದ್ದಾಳೆ. ನಂತರ ಬನ್ನಿ ಅಕ್ಕ ನಾನು ನಿಮ್ಮ ಮನೆ ಅತ್ರ ಡ್ರಾಪ್ ಮಾಡ್ತೀನಿ ಅಂತ ಹೇಳಿ ಬೈಕ್ನಲ್ಲಿ ಮಹಿಳೆಯನ್ನು ಕೂರಿಸಿಕೊಂಡು ಇಬ್ರು ಹುಡುಗ್ರು ಯಲೋದಹಳ್ಳಿ ಜಮೀನಿನ ತೋಟವೊಂದಕ್ಕೆ ಕರೆದೊಯ್ದಿದ್ದಾರೆ.

ರಾತ್ರಿಯಿಡೀ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ:

ಮೊದಲೇ ಕಾತುರದಿಂದ ತುದಿಗಾಲಲ್ಲಿ ನಿಂತಿದ್ದ ಕಾಮುಕರು ಒಬ್ಬರ ನಂತರ ಒಬ್ಬರು ಆಕೆಯ ಮೇಲೆ ಎರೆಗಿದ್ದಾರೆ. ಮತ್ತಿನಲ್ಲಿದ್ದ ಆ ಮಹಿಳೆಗೆ ಅಲ್ಲಿ ಏನು ನಡೆಯುತ್ತಿದೆ ಎಂಬ ಅರಿವೇ ಇಲ್ಲದಂತಾಗಿದೆ. ಇತ್ತ ಈ ಯುವಕರ ಗುಂಪು ಇದೇ ಒಳ್ಳೆ ಸಮಯ ಅಂತ ಸುಮಾರು ಹೊತ್ತು ಆಕೆಯನ್ನ ಮನಬಂದಂತೆ ತಿಂದು ತೇಗಿದ್ದಾರೆ. ಇಡೀ ರಾತ್ರಿ ಆ ಮಹಿಳೆಗೆ ಮಾನವೀಯತೆಯಿಲ್ಲದೆ ನರಕ ತೋರಿಸಿದ್ದಾರೆ. ಸತತ 8 ಗಂಟೆಗಳ ಕಾಲ ಒಂದೇ ಸಮನೆ ಮನಬಂದಂತೆ ಆಕೆಯನ್ನು ತಮ್ಮ ಹೀನ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಅರೆ ಬರೆ ಪ್ರಜ್ಞೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಆಕೆಗೆ ಬಿಟ್ಟು ಬಿಡದಂತೆ ತಮ್ಮ ಕಾಮದಾಸೆ ತೀರುವವರೆಗೂ ಒಂದೇ ಸಮನೆ ಒಬ್ಬರ ನಂತರ ಒಬ್ಬರು ಎರಗುತ್ತಲೇ ಹೋಗಿದ್ದಾರೆ. ಆಕೆಯ ಬಗ್ಗೆ ಸ್ವಲ್ಪವೂ ಕನಿಕರ ತೋರದೆ ಮಾನವ ಮೃಗಗಳಂತೆ ವರ್ತನೆ ಮಾಡಿದ್ದಾರೆ.ಸುಮಾರು 10 ಜನ ಸಾಮೂಹಿಕವಾಗಿ ರಾತ್ರಿ 7:30 ರಿಂದ ಮುಂಜಾನೆ 3 ರ ವರೆಗು ಅತ್ಯಾಚಾರ ಮಾಡಿ ಅದನ್ನು ಫೋಟೋ ಹಾಗೂ ವಿಡಿಯೋ ಮಾಡಿಕೊಂಡು ವಿಕೃತಿ ಮೆರೆದಿದ್ದಾರೆ.ಎಲ್ಲಾರ ಸರದಿ ಮುಗಿದ ಬಳಿಕ ಆಕೆಯನ್ನು ಅಲ್ಲೇ ಬಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.ಇತ್ತ ಅರೆ ಪ್ರಜ್ಞೆಯಲ್ಲಿ ಇದ್ದ ಸಂತ್ರಸ್ತ ಮಹಿಳೆ ಕಾಮುಕರ ಅಟ್ಟಹಾಸಕ್ಕೆ ಸುಸ್ತಾಗಿ ನಿದ್ರೆಗೆ ಜಾರಿದ್ದಾಳೆ. ನಂತರ ಮುಂಜಾನೆ 3 ಆಕೆಗೆ ಎಚ್ಚರವಾದಾಗ ದಿಕ್ಕು ತೋಚದಂತಾಗಿದೆ, ನಾನು ಇಲ್ಲಿಗೆ ಹೇಗೆ ಬಂದೆ, ಮೈಯೆಲ್ಲಾ ನೋವಿನ ಅನುಭವ ಜೊತೆಗೆ ಚದುರಿದ ಬಟ್ಟೆ ಎಲ್ಲವೂ ಅಯೋಮಯ ಸ್ಥಿತಿ, ನಂತರ ಬಟ್ಟೆ ಸರಿಪಡಿಸಿಕೊಂಡು ಗೊಂದಲದಲ್ಲಿಯೇ ಅಲ್ಲಿಂದ ಸೀದಾ ತನ್ನ ಅಣ್ಣನ ಮನೆಗೆ ತಲುಪಿದ್ದಾಳೆ. ಮಹಿಳೆಗೆ ತನ್ನ ದೇಹದ ಹಸಿ ಬಿಸಿ ನೋವಿನ ಬಗ್ಗೆ ಅರಿವಾದರೂ ಸಮಾಜದ ಭಯ ಹಾಗೂ ಮಾನ ಹಾನಿಗೆ ಹೆದರಿ ತನಗಾದಂತಹ ಘೋರಅನ್ಯಾಯವನ್ನು ಯಾರಿಗೂ ಹೇಳಲಾಗದೆ ತನ್ನಲ್ಲೇ ಕೊರಗುತ್ತಿರುತ್ತಾಳೆ. ಈ ಘಟನೆ ನಡೆದು 3-4 ದಿನ ಆದರೂ ಕೂಡ ಯಾರಿಗೂ ಇದರ ಬಗ್ಗೆ ಮಾಹಿತಿ ಇರಲ್ಲ. ಇತ್ತ ಕಡೆ ಈ ಸಂತ್ರಸ್ತ ಮಹಿಳೆ ಕೂಡ ಘಟನೆ ಬಗ್ಗೆ ತವರು ಮನೆಯಲ್ಲಾಗಲಿ ಸಂಬಂಧಿಕರ ಬಳಿಯಾಗಲಿ ಕಿಂಚಿಂತು ಬಾಯಿ ಬಿಟ್ಟಿರಲಿಲ್ಲ. ಸಮಾಜದ ಭಯವೋ ಮಾನದ ಪ್ರಶ್ಯೆಯೋ ಆಕೆಯ ಬಾಯಿಗೆ ಬೀಗ ಹಾಕಿಸಿತ್ತು. ಇನ್ನೂ ಈ ಕಾಮುಕರಂತೂ ತಾವು ಮಾಡಿದ ಸಾಧನೆಯ ಕಾರ್ಯವನ್ನು ವಿಡಿಯೋ ಫೋಟೋ ತಮ್ಮ ಸ್ನೇಹಿತರಿಗೆ ತೋರ್ಸಿ ಹೆಮ್ಮೆ ಪಡುವ ಹುರುಪಲ್ಲಿದ್ದರು. ಇದೆ ನೋಡಿ ಇವರಿಗೆ ಆಪತ್ತು ತಂದಿದ್ದು. ಕ್ರೌರ್ಯ ಎಸೆಗಿದ್ದಲ್ಲದೆ, ಅದನ್ನ ಚಿತ್ರೀಕರಿಸಿದ್ದಲ್ಲದೆ, ಅದನ್ನ ವಾಟ್ಸಾಪ್, ಗ್ರೂಪ್ಸ್, ಹಾಗೂ Social Media ದಲ್ಲಿ ಶೇರ್ ಮಾಡಿ ಸುದ್ದಿ ಊರೆಲ್ಲ ಹಬ್ಬವಂತೆ ಮಾಡಿದ್ದಾರೆ.

ಆದರೆ ಘಟನೆ ಇಲ್ಲಿಗೆ ಮುಗಿದಿಲ್ಲ:-

ಈ ಪ್ರಕರಣ ಗಂಭೀರ ಸ್ವರೂಪ ಪಡೆಯಲು ಆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಫೋಟೋ ಹಾಗೂ ವಿಡಿಯೋ ತುಣುಕುಗಳು ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರವಾಗಿ ಕೊನೆಗೂ ಸಂತ್ರಸ್ತ ಮಹಿಳೆಯ ಸಂಬಂಧಿಕರಿಗೆ ಜೂನ್ 7 ರಂದು ಕಾಣ ಸಿಗುತ್ತವೆ.

ಜೂನ್ (10):
ಜೂನ್ 8 ರಂದು ಸಂತ್ರಸ್ತ ಮಹಿಳೆಯ ಅಣ್ಣನ ಮಗ ಕರೆ ಮಾಡಿ, ಆಕೆಯ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳು ಮೊಬೈಲ್ಗಳಲ್ಲಿ ಹರಿದಾಡುತ್ತಿರುವುದರ ಬಗ್ಗೆ ಮಾಹಿತಿ ನೀಡಿದಾಗಲೇ ಮಹಿಳೆಗೆ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಾಗಿದೆ. ಅಲ್ಲಿನ ಸಂಪೂರ್ಣ ಘಟನೆಯನ್ನು ಫೋಟೋ ಹಾಗೂ ವಿಡಿಯೋ ಮೂಲಕ ಚಿತ್ರೀಕರಿಸಿದ್ದ ಕಿಡಿಗೇಡಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಷ್ಯ ತಿಳಿದ ಬಳಿಕ ಮಹಿಳೆ ಆಘಾತಕ್ಕೊಳಗಿದ್ದಾಳೆ, ಆದ್ರೆ ಸಂಬಂಧಿಕರು ಆಕೆಗೆ ದೈರ್ಯ ತುಂಬಿ ಆಕೆಯನ್ನ ಕರ್ಕೊಂಡು ಜೂನ್ 9 ರಂದು ಪೋಲಿಸ್ ಠಾಣೆಗೆ ತೆರಳಿ ಘಟನೆ ಬಗ್ಗೆ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೇಗದ ಕಾರ್ಯಾಚರಣೆ ನಡೆಸಿ ಈಗಾಗಲೇ 10 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು, ತನಿಕೆ ಮುಂದುವರೆದಿದೆ.ಆರೋಪಿಗಳಾದ ಚಟಾಕಿ ನಾಗರಾಜ , ಇಸ್ತ್ರಿ ನಾಗರಾಜ, ಮಧು, ಅರ್ಜುನ, ಬಸವಂತ, ಕುಂದೂರು ಮಾರುತಿ, ಜೋಗಿ ಸುನೀಲ, ಮನು, ಪ್ರದೀಪ್ , ಹೆಗ್ಗ ಮಾರುತಿ ಬಂಧಿತರಾಗಿದ್ದಾರೆ.

ಈ ಮದ್ಯೆ ಪೋಲಿಸ್ ಠಾಣೆ ಬಳಿ ಆರೋಪಿಗಳ ಸಂಬಂಧಿಕರಿಂದ ಹೈಡ್ರಾಮಾ ಶುರುವಾಗಿದೆ, ತಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ ಸುಳ್ಳು ಆರೋಪದಡಿ ಬಂಧಿಸಿದ್ದಾರೆ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ. ಕುಟುಂಬಸ್ಥರಿಗೆ ಸಂಪೂರ್ಣ ಘಟನೆ ಬಗ್ಗೆ ವಿವರಿಸಿ ಅವರನ್ನು ಸಂಧಾನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೂ ಆರೋಪಿಗಳನ್ನು ವಿಚಾರಿಸಿ 9 ಆರೋಪಿಗಳನ್ನು 14 ದಿನಗಳ ಕಾಲ ಕಾರಾಗೃಹ ವಾಸಕ್ಕೆ ಜುಡಿಷಿಯಲ್ ನ್ಯಾಯಾಲಯ ವಿಧಿಸಿದೆ. ಈ ಗುಂಪಿನಲ್ಲಿ ಒಬ್ಬ ಅಪ್ರಾಪ್ತ ಬಾಲಕ ಕೂಡ ಇದ್ದು ಅವನನ್ನು ಬಾಲಾಪರಾಧಿ ಎಂದು ರಿಮ್ಯಾಂಡ್ ಹೋಮ್ ಗೆ ಶಿಫ್ಟ್ ಮಾಡಲಾಗಿದೆ.ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಗೌಪ್ಯ ಸ್ಥಳದಲ್ಲಿ ರಕ್ಷಣೆ ಮಾಡಲಾಗಿದೆ.

ಈ ಪ್ರಕರಣವು ರಾಜ್ಯಾದ್ಯಂತ ಗಂಭೀರತೆಯನ್ನು ಪಡೆದುಕೊಳ್ಳುತ್ತಿದೆ.

Leave a Comment