Impacts Of Women Masturbation ಮಹಿಳೆಯರ ಹಸ್ತಮೈಥುನ ಬಗ್ಗೆ ಸ್ಪಷ್ಟ, ವೈಜ್ಞಾನಿಕ ಮತ್ತು ಸುರಕ್ಷಿತ ಮಾಹಿತಿ:-
Introduction
ಮಹಿಳೆಯರು ತಮ್ಮದೇ ದೇಹದ ಮೇಲೆ ಸ್ಪರ್ಶ, ಉತ್ತೇಜನೆ ಮೂಲಕ ಲೈಂಗಿಕ ಆನಂದವನ್ನು ಪಡೆಯುವುದನ್ನು ಮಾಸ್ಟರ್ಬೇಷನ್ (ಹಸ್ತಮೈಥುನ) ಎಂದು ಕರೆಯುತ್ತಾರೆ. ಇದು ಸಂಪೂರ್ಣ ಸಹಜ ಮತ್ತು ಸಾಮಾನ್ಯ. ಪ್ರತಿಯೊಬ್ಬ ಮಹಿಳೆಯು ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಈ ಕ್ರಿಯೆಯಿಂದ ಸಂತೃಪ್ತಿ ಹೊಂದಿರುತ್ತಾಳೆ. ಅದರಲ್ಲೂ ಹದಿನೆಂಟು ತುಂಬಿದ ನಂತರ ಮಹಿಳೆಯರ ದೇಹದಲ್ಲಿನ ಹಾರ್ಮೋನ್ ಗಳ ಉತ್ತೇಜನೆಯಿಂದ ವಾರಕ್ಕೊಮ್ಮೆ ಹಸ್ತಮೈಥುನ ಮಾಡಲು ಆಸಕ್ತಿ ಉಂಟಾಗುತ್ತದೆ ಎಂದು ಸಂಶೋಧನೆ ಮೂಲಕ ಸಾಬೀತಾಗಿದೆ.
ತುಂಬಾ ಜನ ಏನ್ ಅನ್ಕೋತಾರೆ ಅಂದ್ರೆ ಹಸ್ತಮೈಥುನ ಮಾಡ್ಕೋಳೋದ್ರಿಂದ ತಮ್ಮ ಯೋನಿ ಸಡಿಲ ಆಗಬಹುದು, ಹಾರ್ಮೋನ್ ಹಾಳಾಗಬಹುದು, ಭವಿಷ್ಯದಲ್ಲಿ ಗರ್ಭಧಾರಣೆ ಸಮಸ್ಯೆ ಆಗಬಹುದು, ಈ ತರ ಎಲ್ಲಾ ಯೋಚ್ನೆ ಮಾಡ್ತಾರೆ. ಒಂದು ನೀವು ಸದಾ ನೆನಪಲ್ಲಿ ಇಟ್ಕೋಬೇಕಾಗಿರೋದು ಅಂದ್ರೆ ಇದ್ಯಾವುದೇ ಸಮಸ್ಯೆ ಹಸ್ತಮೈಥುನ ದಿಂದ ಸಂಭವಿಸುವುದಿಲ್ಲ ಅನ್ನೋದು. ಹಸ್ತಮೈಥುನ ಅನ್ನೋದು ಯಾರ್ ಬೇಕಾದ್ರೂ ಮಾಡ್ಕೋಬೋದು ಹುಡ್ಗೀರು, ಆಂಟಿಯರು, ಮದ್ವೆ ಆಗಿರೋರು ಪ್ರತಿಯೊಬ್ಬರು ಅವರವರ ಇಚ್ಛೆಗೆ ತಕ್ಕಂತೆ ಅವರಿಗೆ ಬೇಕೆನಿಸಿದಾಗ ಈ ಕ್ರಿಯೆಯಿಂದ ಸಂತೃಪ್ತಿ ಹೊಂದಬಹುದು.
Impacts Of Women Masturbation

ಮಾಸ್ಟರ್ಬೇಷನ್ ಉತ್ತಮ ಪ್ರಭಾವಗಳು (Positive Impacts)
1. ಒತ್ತಡ ತಗ್ಗಿಸುತ್ತದೆ
ಮಾಸ್ಟರ್ಬೇಷನ್ ನಿಂದ ದೇಹದಲ್ಲಿ ಎಂಡಾರ್ಫಿನ್ ಎಂಬ ಹಾರ್ಮೋನುಗಳು ಬಿಡುಗಡೆ ಆಗುತ್ತವೆ, ಇದು ಒತ್ತಡ, ಆತಂಕವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ಮಹಿಳೆಯರು ತಮ್ಮ ಯೋನಿಯ ಒಳಗೆ ಬೆರಳು ಅಥವಾ ವಸ್ತುಗಳನ್ನು ಹಾಕಿ ಕಾಮ ಪರಾಕಾಷ್ಠೆಯನ್ನು ತಲುಪುವ ವೇಳೆ ಮಹಿಳೆಯರ ದೇಹದಲ್ಲಿ ಎಂಡರ್ಫಿನ್ , ಡೋಪಮೈನ್, ಸೇರೋಟೋನಿಸ್ ಮತ್ತು ಆಕ್ಸಿಟೋನಿಸ್ ನಂತಹ ಮುದನೀಡುವ ರಸದೂತಗಳು ಬಿಡುಗಡೆಯಾಗುತ್ತವೆ.ಪರಿಣಾಮವಾಗಿ ಸುಖವನ್ನು ಗ್ರಹಿಸುವ ಮೆದುಳಿನ ಭಾಗದಲ್ಲಿ ಈ ರಸದೂತಗಳು ತಲುಪಿ ಮಾನಸಿಕ ತೃಪ್ತಿ ಹಾಗೂ ಸುಖದ ಉತ್ತುಂಗವನ್ನು ಒದಗಿಸುವ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
2. ಉತ್ತಮ ನಿದ್ರೆ
ಮಾಸ್ಟರ್ಬೇಷನ್ ನಂತರ ದೇಹ ರಿಲಾಕ್ಸ್ ಆಗುತ್ತದೆ, ಇದರಿಂದ ನಿದ್ರೆ ಸುಲಭವಾಗುತ್ತದೆ. ಪ್ರತಿಯೊಬ್ಬ ಮಹಿಳಿಗೆ ಹಸ್ತಮೈಥನ ಮಾಡಿಕೊಂಡ ನಂತರ ತಮ್ಮ ಮನಸ್ಸು ಹಾಗೂ ದೇಹ ಹಗುರವಾದಂತೆ ಭಾಸವಾಗುತ್ತದೆ. ದೇಹ ಸುಸ್ತಾದಂತೆ ಭಾಸವಾಗಿ ನಿದ್ರೆಗೆ ಜಾರಿಕೊಳ್ಳುತ್ತಾರೆ.
3. ಪೀರಿಯಡ್ಸ್ ವೇಳೆ ನೋವು ಕಡಿಮೆ
ಕೆಲವರಿಗೆ ಪೀರಿಯಡ್ಸ್ ಕಾಲದ ಕಷ್ಟ (cramps) ತಗ್ಗಿಸಬಹುದು. ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುವ ವೇಳೆ ತಮ್ಮ ಬೆರಳು ಅಥವಾ ವಸ್ತುಗಳನ್ನು ಯೋನಿಯ ಒಳಗೆ ಹಾಕಿಕೊಳ್ಳುವುದರಿಂದ ಯೋನಿ ಭಾಗ ಸ್ಪಲ್ಪ ಸಡಿಲಗೊಳ್ಳುತ್ತದೆ. ಇದರಿಂದ ಮುಟ್ಟು ಅಗುವ ವೇಳೆ ನೋವು ಕಡಿಮೆ ಆಗಬಹುದು.
4. ಲೈಂಗಿಕ ಅರಿವು ಹೆಚ್ಚುತ್ತದೆ
ತಮ್ಮ ದೇಹದ ಯಾವ ಭಾಗಕ್ಕೆ ಸ್ಪರ್ಶ ಮಾಡಿದಾಗ ಆನಂದವಾಗುತ್ತದೆ ಎಂಬುದು ಗೊತ್ತಾಗುತ್ತದೆ, ಇದರಿಂದ ಭವಿಷ್ಯದ ಲೈಂಗಿಕ ಜೀವನ ಸುಧಾರಿಸುತ್ತದೆ ಹಾಗೂ ತನ್ನ ಸಂಗಾತಿಯೊಂದಿಗೆ ಸಲ್ಲಾಪದಲ್ಲಿ ತೊಡಗುವಾಗ ತನಗೆ ಎಲ್ಲಿ ಹೇಗೆ ಮಾಡಿದರೆ ತಾನು ಸಂಪೂರ್ಣ ತೃಪ್ತಿ ಹೊಂದಬಲ್ಲೆ ಎಂಬುದನ್ನು ಸ್ವತಃ ಅರಿಯುತ್ತಾಳೆ.
5. ಸುರಕ್ಷಿತ – ಗರ್ಭಧಾರಣೆ ಅಥವಾ STD ಅಪಾಯವಿಲ್ಲ
ಯಾವುದೇ ಸೋಂಕು ಅಥವಾ ಗರ್ಭಧಾರಣೆಯ ಅಪಾಯವಿಲ್ಲ (ವಸ್ತುಗಳನ್ನು ಒಳಗೆ ಹಾಕದಿದ್ದರೆ). ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯರು ಹಸ್ತಮೈಥುನ ಮಾಡುವ ವೇಳೆ ತಮ್ಮ ಬೆರಳನ್ನು ಉಪಯೋಗಿಸುವುದರಿಂದ ಯಾವುದೇ ಸೋಂಕು ಅಥವಾ ಗರ್ಭ ದರಿಸುವ ಅಪಾಯ ಸಂಭವಿಸುವದಿಲ್ಲ.
6. ಪೆಲ್ವಿಕ್ ಫ್ಲೋರ್ ಬಲಗೊಳ್ಳಬಹುದು
ಹಸ್ತಮೈಥುನ ಮಾಡುವುದರಿಂದ ಕೆಲವು ಮಹಿಳೆಯರ pelvic muscles ಬಲವಾಗಬಹುದು. ಇದು ಮಹಿಳೆಯರು ಯೂರಿನ್ ಸುಲಭವಾಗಿ ಮಾಡಲು ಹಾಗೂ ತಡೆದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಅದೇ ರೀತಿ ಸ್ವರತಿಯ ಸಂದರ್ಭದಲ್ಲಿ ಮುಚ್ಚಿರುವ ಗರ್ಭಕಂಠ ತೆರೆಕೊಳ್ಳುತ್ತದೆ ಇದರಿಂದ ಸಂಗ್ರಹಗೊಂಡಿದ್ದ ಅನವಶ್ಯಕ ದ್ರವ ಹೊರ ಸೂಸುತ್ತದೆ.
ನಕಾರಾತ್ಮಕ ಪ್ರಭಾವಗಳು (Negative Impacts) (ಸಾಮಾನ್ಯವಾಗಿ ಹೆಚ್ಚು ಪ್ರಮಾಣದಲ್ಲಿ ಅಥವಾ ತಪ್ಪು ವಿಧಾನದಲ್ಲಿ ಮಾಡಿದಾಗ ಮಾತ್ರ)
1. ಅಧಿಕ ಪ್ರಮಾಣ – soreness / irritation
ಅತಿಯಾಗಿ ಮಹಿಳೆಯರು ತಮ್ಮ ಯೋನಿ ಭಾಗದಲ್ಲಿ ಬೆರಳು ಹಾಕಿಕೊಳ್ಳುವುದರಿಂದ ಸ್ವಲ್ಪ ನೋವು, ರೇಷೆ ಅಥವಾ ಬೇಸರವಬಹುದು. ಇದು ದಾಂಪತ್ಯ ಜೀವನ ಹಾಗೂ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆ ಮಾಡಬಹುದು.
2. ವಸ್ತುಗಳ ಬಳಕೆ
ಅಶುದ್ಧ ಅಥವಾ ತೀಕ್ಷ್ಣ ವಸ್ತುಗಳು ಬಳಸಿದರೆ ಗಾಯ, ಇನ್ಫೆಕ್ಷನ್ ಅಪಾಯ ಹೆಚ್ಚು. ಉದಾಹರಣೆಗೆ ತರಕಾರಿಗಳು, ನುಣ್ಣನೆಯ ಪ್ಲಾಸ್ಟಿಕ್ ಸಾಮಗ್ರಿಗಳು ಹಾಗೂ ಇತರೆ ವಸ್ತುಗಳು. ಈ ರೀತಿ ವಸ್ತುಗಳನ್ನು ಬಳಸುವುದರಿಂದ ಮಹಿಳೆಯರ ಯೋನಿ ಭಾಗದಲ್ಲಿ ಉರಿ ಅಥವಾ ನೋವು ಉಂಟಾಗುವ ಸಾಧ್ಯತೆಗಳಿವೆ.
3. ಅಪರಾಧ ಮನೋಭಾವ
ಸಂಸ್ಕೃತಿ ಅಥವಾ ತಪ್ಪು ನಂಬಿಕೆಗಳಿಂದ ಕೆಲವರಿಗೆ ಮಾನಸಿಕ ಒತ್ತಡ ಹಾಗೂ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ , ಹಲವು ಬಾರಿ ನಾವು ಈ ರೀತಿ ಮಾಡಬಾರದಿತ್ತು ಎಂಬ ಆಲೋಚನೆ ಮನಸ್ಸಿನಲ್ಲಿ ಪದೇ ಪದೇ ಕಾಡುತ್ತಿರುತ್ತದೆ.
4. ದೈನಂದಿನ ಜೀವನಕ್ಕೆ ಅಡ್ಡಿಯಾಗಬಹುದು
ಹೆಚ್ಚಾಗಿ ಮಾಡುವುದು ದೈಹಿಕ ಅಥವಾ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅತಿಯಾಗಿ ಹಸ್ತು ಮೈಥುನ ಮಾಡಿ ಸಂತೃಪ್ತಿ ಪಡೆದುಕೊಳ್ಳುವುದರಿಂದ ವೈವಾಹಿಕ ಜೀವನದ ಮೇಲೆ ವ್ಯಾಮೋಹ ಕಡಿಮೆಯಾಗಬದು , ತನ್ನ ಪ್ರೇಯಸಿಯ ಜೊತೆಗೆ ಏಕಾಂತದಲ್ಲಿ ಕಾಲ ಕಳೆಯುವುದರ ಬಗೆಗೆ ಆಸಕ್ತಿ ಕಡಿಮೆಯಾಗಬುದು.
ಮಹಿಳೆಯರು ಸುರಕ್ಷಿತವಾಗಿ ಹಸ್ತಮೈಥನ ಮಾಡುವ ವಿಧಾನಗಳು:-
- ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ .
- ಉಗುರುಗಳು ಉದ್ಧವಾಗಿದ್ದಲ್ಲಿ ಕತ್ತರಿಸಿಕೊಳ್ಳುವುದು ಉತ್ತಮ .
- ವಸ್ತುಗಳನ್ನು ಬಳಸುವ ಮುನ್ನ ಅದನ್ನು ಶುಭ್ರಗೊಳಿಸಿ .
- ಎಣ್ಣೆ ಅಥವಾ ಇನ್ಯಾವುದೇ ದ್ರವ ಪದಾರ್ಥಗಳನ್ನು ಯೋನಿಯ ಭಾಗಕ್ಕೆ ಹಚ್ಚದೇ ಇರುವುದು ಉತ್ತಮ.
- ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ಅಥವಾ ನಿಮ್ಮ ಖಾಸಗಿ ಕೋಣೆಯಲ್ಲಿ ಒಬ್ಬರೇ ಇದ್ದಾಗ ಮಾತ್ರ ಶುರು ಮಾಡುವುದು ಉತ್ತಮ.
- ಯೋನಿಯ ಪ್ರವೇಶ ಭಾಗವನ್ನು ಮೃದುವಾಗಿ ಸ್ಪರ್ಶಿಸಬೇಕು , ಒಮ್ಮೆ ಶುರು ಮಾಡಿದ ನಂತರ ನಿಮ್ಮ ಕಾಮ ಪರಾಕಾಷ್ಠೆಗೆ ಅನುಗುಣವಾಗಿ ವೇಗ ಮತ್ತು ಒತ್ತಡವನ್ನು ನಿಧಾನಕ್ಕೆ ಹೆಚ್ಚಿಸಿಕೊಳ್ಳಿ.
ಮಹಿಳೆಯರು ಹಸ್ತಮೈಥುನ ನಿಯಂತ್ರಿಸಲು ಕೆಲವು ಸಲಹೆಗಳು:-
- ಒಂಟಿತನದಿಂದ ದೂರವಿರಿ.
- ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಷಯಗಳನ್ನು ನೋಡುವುದು ನಿಲ್ಲಿಸಿ.
- ರಾತ್ರಿ ಮಲಗುವ ಮುನ್ನ ಹಾಸಿಗೆಯಲ್ಲಿ ಫೋನ್ ಬಳಸುವುದು ಕಡಿಮೆ ಮಾಡಿ.
- ಹಸ್ತಮೈಥುನ ಆಸೆ ಆದಾಗ ನೀವು ಇರುವ ಜಾಗದಿಂದ ಎದ್ದು ಆಚೆ ಬಂದು ಸ್ವಲ್ಪ ದೂರ ನಡೆಯಿರಿ ಇಲ್ಲವೇ ಯಾವುದೋ ಒಂದು ಕೆಲ್ಸದಲ್ಲಿ ಮಗ್ನರಾಗಿ.
- ಒತ್ತಡವಾದಾಗ ವ್ಯಾಯಾಮ, ದ್ಯಾನ ಮಾಡುವುದು ಕಲಿಯಿರಿ.
- ನಿಗದಿತ ಗುರಿ ಹೊಂದಿಸಿಕೊಳ್ಳಿ ( ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ) ಹೀಗೆ ಮಾಡುವುದರಿಂದ ನಿಮ್ಮ ಪರಿಹಾರ ಬಗೆಹರಿಯುತ್ತದೆ.
Conclusion
ಮಹಿಳೆಯರಲ್ಲಿ ಹಸ್ತು ಮೈಥುನ ವೈಜ್ಞಾನಿಕವಾಗಿ ಸಹಜ ಹಾಗೂ ಆರೋಗ್ಯಕರ. ಇದು ಸರ್ವೇಸಾಮಾನ್ಯ ಆಗಿರುವುದರಿಂದ ನೀವು ಇದರ ಬಗ್ಗೆ ಯಾವುದೇ ತಪ್ಪು ಕಲ್ಪನೆ ಹೊಂದಬೇಕಿಲ್ಲ, ಅದೇ ರೀತಿ ಅತಿಯಾದ ಹಸ್ತಮೈಥುನ ಅಪಾಯಕ್ಕೆ ಎಡೆಮಾಡಿಕೊಡಬಹುದು. ನಿಮಗೆ ಯಾವುದೇ ತೊಂದರೆ ಉಂಟಾದಲ್ಲಿ ವೈದ್ಯರನ್ನು ಸಂಪರ್ಕಿಸಿ.


